Posted in

Gajamukha Vandisuve in Kannada

Sri Ganesh

॥ Gajamukha Vandisuve Lyrics ॥

ರಾಗ: ನಾಟ ಆದಿತಾಳ

ಗಜಮುಖ ವಂದಿಸುವೆ ಕರುಣಿಸಿ ಕಾಯೋ
ಗಜಮುಖ ವಂದಿಪೆ ಗಜಗೌರಿಯ ಪುತ್ರ
ಅಜನ ಪಿತನ ಮೊಮ್ಮಗನ ಮೋಹದ ಬಾಲಾ – ।

ನೀಲಕಂಠನ ಸುತ ಬಾಲಗಣೇಶನೇ
ಬಾರಿ ಬಾರಿಗೆ ನಿನ್ನ ಸ್ಮರಣೆ ಮಾಡುವೆನು ।
ಪರ್ವತನಾ ಪುತ್ರಿ ಪಾರ್ವತಿಯ ಕುಮಾರ
ಗರುವಿಯ ಚಂದ್ರಗೆ ಸ್ಠಿರಶಾಪ ಕೊಟ್ಟನೋ ॥

ಮತಿಗೆಟ್ಟ ರಾವಣ ಪೂಜಿಸದೆ
ಸೀತಾಪತಿ ಕರದಿಂದಲಿ ಹತನಾಗಿ ಹೋದನು ।
ವಾರಿಜನಾಭ ಶ್ರೀ ಹಯವದನನ ಪಾದ
ಸೇರುವ ಮಾರ್ಗದ ದಾರಿಯ ತೋರಿಸೋ – ।

*****
ಶ್ರೀ ವಾದಿರಾಜರು

Gajamukha Vandisuve in English:

Leave a Reply

Your email address will not be published. Required fields are marked *